MAA-KANNADA SHORT FILM

Woman is a symbol of patience. She plays different roles as a mother,sister,wife. She works for the development of her family both inside and outside th house. She faces all unexpected turns of life with courage and confidence. Even when she feels her life is INCOMPLETE,she turns towards the COMPLETENESS of her life.The sound of the celebration of her completeness….”MAA…”

A short film directed by 18 year old director PUNEETH B A throws light on the life of an orphaned wife who takes care of her child and shows the society that a woman can lead life even without the assistance of a man.

CAST AND CREW:
A M Prakash – Husband
Karuna – Wife
Savya – Child

Concept-Story-Screenplay-Editing-Cinematography-Direction: PUNEETH B A

Posted in Uncategorized | 1 ಟಿಪ್ಪಣಿ

ಹಾಗೆ ಸುಮ್ಮನೆಯಲ್ಲಿ ಬಿ.ಸುರೇಶ್!!

ಬಿ.ಸುರೇಶ್ – ಕನ್ನಡದ ಉತ್ತಮ ನಿರ್ದೇಶಕ.ಹದ ಗೆಟ್ಟು,ಕಥೆಯನ್ನೇ ಹಾಳು ಮಾಡಿ ಧಾರಾವಾಹಿಗಳನ್ನು ಮಾಡುವ ಸಮಯದಲ್ಲಿ,ಬಿ.ಸುರೇಶ್ ರವರ ‘ನಾಕು ತಂತಿ’ ಮತ್ತು ‘ತಕಧಿಮಿತಾ’ ತಂತಿ ತಪ್ಪದೆ ಸರಿ ಹಾದಿಯಲ್ಲಿ ಹೋಗುತ್ತಿರುವುದು ಬಹಳ ವಿಶೇಷ.ಬಿ.ಸುರೇಶ್ ಬಹಳ ಒಳ್ಳೆಯ ಬರಹಗಾರ,ನಿರ್ದೆಶಕ,ರಂಗಕರ್ಮಿ,ನಟ(ಅಧ್ಬುತ!!).

ಬಿ.ಸುರೇಶ್ ರವರು ನನಗೆ ಮತ್ತು ನನ್ನ ಪ್ರೀತಿಯ ಬ್ಲಾಗ್ ‘ಹಾಗೆ ಸುಮ್ಮನೆ’ ಗೆ ಕೆಲವು ಹಿತನುಡಿಗಳನ್ನು ಕಳುಹಿಸಿದ್ದಾರೆ.ಅದನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟ ಪಡುತ್ತೀನಿ.ನೀವೂ ಒದಿರಿ.

“ನಾನು ಬರೆದುದೆಲ್ಲವೂ ಹಾಗೇ ಸುಮ್ಮನೆ.

ಅವುಗಳಿಂದ ನಿಮಗೇನಾದರೂ ದಕ್ಕಿದ್ದರೆ ಅದೂ ಹಾಗೇ ಸುಮ್ಮನೆ.

ಬದುಕು ಅನ್ನೋದೇ ಹಾಗೇ ಸುಮ್ಮನೆ

ದಕ್ಕಿಸಕೊಳ್ಲಬೇಕೆಂದಿಲ್ಲ.

ಬದುಕಬೇಕಷ್ಟೆ, ಹಾಗೇ ಸುಮ್ಮನೆ

-ನಿಮ್ಮವ
ಬಿ.ಸುರೇಶ”

‘ಹಾಗೆ ಸುಮ್ಮನೆ’ ಪುನೀತ್

Posted in ಪಿಸು..ಪಿಸು | 1 ಟಿಪ್ಪಣಿ

ಬಣ್ಣದ ಲೋಕ

ಬಣ್ಣದ ರೆಕ್ಕೆಯ ಬೆನ್ನಲಿ ಮೂಡಿಸಿ

ಹಾರುವ ಹಕ್ಕಿ ಆಗೋಣ

ಬಣ್ಣದ ಲೋಕಕೆ ಹೋಗೋಣ

ತೇಲುತಾ..ಹಾರುತಾ ಹೋಗೋಣ

 

ಜಿಗಿಯುತಾ ಜಾಲಿ ಮಾಡೋಣ

ತೆಲುತಾ..ಹಾರುತಾ ಹೋಗೋಣ

ಶಾಲೆಯ ಗೋಜು ಅಲ್ಲಿಲ್ಲ

ಬಣ್ಣಗಳಾಟ ನಮಗೆಲ್ಲಾ..

 

ಲೋಕದ ಬಾಗಿಲು ತೆರೆದಿತ್ತು

ಬಣ್ಣದ ಹೊಳೆಯು ಹರಿದಿತ್ತು

ಕಾಮನಬಿಲ್ಲು ಅಲ್ಲಿತ್ತು

ಸ್ವಾಗತ ಮಾಡಲು ಗುಲಾಬಿ ಸಾಲೆ ಅಲ್ಲಿತ್ತು..

 

-ನಿಮ್ಮ ‘ ಹಾಗೆ ಸುಮ್ಮನೆ ‘ಪುನೀತ್.ಬಿ.ಎ.

Posted in ಕವಿಯ ಕಾವ್ಯಧಾರೆ.. | ನಿಮ್ಮ ಟಿಪ್ಪಣಿ ಬರೆಯಿರಿ

ಲಂಚ ತೆಗೆದುಕೊಂಡರೆ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗ್ತಾರೆ…

Picture

ಲಂಚ ತೆಗೆದುಕೊಳ್ಳೋರ ಮಕ್ಕಳು ಲೂಸ್ ಮಾದ ಆಗ್ತಾರಂತೆ….ಮೆಂಟಲ್ ಮಂಜಿ ಆಗ್ತಾರಂತೆ..

ಈ ವಿಷಯನಾ ನಾನ್ ಹೇಳುತಿರುವುದಲ್ಲ…ಲಂಚ ತಗೋಂಡ  ಮಹಾ ಪುರುಷರ ಮಕ್ಕಳನ್ನು ನೋಡಿ ಈ ಮಾತನ್ನು ಹೇಳುತಿದ್ದೇನೆ…ಲಂಚ ತಗೋಳೊದು ಕೆಮ್ಮು , ನೆಗಡಿ ತರಹದ ಕಾಯಿಲೆಯಲ್ಲ…diabetes ತರಹದ ಕಾಯಿಲೆ..ಒಂದು ಸತಿ ಬಂದ್ರೆ…ಜಪ್ಪಯ್ಯ ಅಂದ್ರೂ ಹೋಗುವುದಿಲ್ಲ…ಒಂದು ಸತಿ ಲಂಚಕ್ಕೆ ತೆಗೆದ ಬಾಯಿ ಮುಚ್ಚುವುದಿಲ್ಲ..ಲಂಚ ಅಂದ್ರೆ ಇನ್ನೊಬ್ಬರ ಶಾಪ ಅಂತ ಅರ್ಥ..ಲಂಚ ಕೊಡುವ ಯಾರಾದರೂ ಪ್ರೀತಿಯಿಂದ,ಅಕ್ಕರೆಯಿಂದ ಕೊಟ್ಟಾರಿಯೇ??ಶಾಪ ಹಾಕಿ ಕೊಡುತ್ತಾರೆ…ಇದು ಹೇಗೆ ಲಂಚ ತೆಗೆದುಕೊಂಡವರಿಗೆ ಒಳ್ಳೆದನ್ನ ಮಾಡಿತು…ಅವರುಗಳು ಮಾಡುವ ಕಚಡಾ ಕೆಲಸಕ್ಕೆ ಪಾಪ ಅವರ ಮಕ್ಕಳು ಬಲಿಯಾಗುತಿದ್ದಾರೆ…ಲಂಚ ತೆಗೆದುಕೊಂಡವರ ಮಕ್ಕಳು ಹುಚ್ಚಾರಾಗುತ್ತಿದ್ದಾರೆ..ಒಬ್ಬ(????) ಸಕತ್ತಾಗಿ ಲಂಚ ಹೋಡಿತಾನೆ..ಪಾಪ ಅವನ ಮನೆಯಲ್ಲಿ ಮಕ್ಕಳು–ಒಂದು ಹುಟ್ಟಿದಂದಿನಿಂದ ಕೈಯಿಲ್ಲದೆ ಹೋದರೆ,ಇನ್ನೊಂದಕ್ಕೆ ತಲೆ ಸರಿಯಿಲ್ಲದೆ ಸದಾ ಮಂಚದ ಮೇಲೆ ಬಿದ್ದಿರುತ್ತೆ…ಇದು ಬೇಕಾ..ಅಷ್ಟೊಂದು ಹಣ ದುಡಿದು ಎನು ತಿಥಿಗೆ ಇಟ್ಕೊತಾರ…     ಇನ್ನೊಬ್ಬರಿದ್ದಾರೆ (????)-ಅವರೂ ಸಕತ್ತಾಗಿ ಲಂಚ ಹೋಡಿತಾರೆ…ಆದರೆ ಎನು ಮಾಡೋದು..ಮನೆಯಲ್ಲಿ ಮಗನಿಗೆ ಹುಚ್ಚು…ಆ ಮಗನಿಗೆ ಹುಚ್ಚು ಅಂದು ಬಿಟ್ಟು, ಮನೆಯ ತುಂಬಾ ನಾಯಿಗಳನ್ನ ಸಾಕಿದ್ದಾರೆ(ಅಕ್ರಮ ದುಡ್ಡನ್ನು ರಕ್ಷಿಸಲು)..ಆ ನಾಯಿಗಳನ್ನು ಕರೆದುಕೊಂಡು ಇವರು ವಾಕಿಂಗ್ ಹೋಗ್ತಾರೆ…ಅದು ಒಡುತಿರುತ್ತದೆ…ಅದರ ಹಿಂದೆ ಇವರು ಒಡುತಿರುತ್ತಾರೆ…ಯಾರು ನಾಯಿ…ಯಾರು master ಎಂಬುದೇ ಗೊತ್ತಾಗುವುದಿಲ್ಲ….ಇಬ್ಬರು ದೂರದಿಂದ ನೋಡಿದರೆ ಒಂದೇ ರೀತಿ ಕಾಣ್ತಾರೆ…ಇಬ್ಬರೂ ಒಂದೆ ಜಾತಿಯಲ್ವ…ನಾಯಿ  ಮೂಳೆಯನ್ನು ನೋಡಿ ಜೊಲ್ಲು ಸುರಿಸುತ್ತೆ…ಲಂಚಕೋರ ಹಣವನ್ನು ನೋಡಿ ಜೊಲ್ಲು ಸುರಿಸುತ್ತಾನೆ….ಇವೆಲ್ಲವನ್ನೂ ಕಂಡರೆ…ನಾನು ಹೇಳಿದ ವಿಚಾರ ನಿಜ ಎನಿಸುತ್ತದೆ….ಇದು ಸುಮ್ಮನೆ ಕೇಳಿ ನಕ್ಕು ಸುಮ್ಮನಾಗುವ ವಿಷಯವಲ್ಲ….ಯಾರದೋ ತಪ್ಪಿಗೆ….ಯಾರೋ ಯಾಕೆ ನೋವು ಅನುಭವಿಸ ಬೇಕು…ದೇವರು ಹಾಗೆ ಸುಮ್ಮನೆ  ಕೂತು ಕೈ ಚಳಕ ತೋರಿಸುತ್ತಿದ್ದಾನೆ…ಈಗಲಾದರು ಎಚ್ಚರಗೊಳ್ಳಿ “ಮಿ.ಲಂಚನಾಥ್”..

ಎಲ್ಲರಿಗೂ ಹೇಳಿ:”ಲಂಚ ತೆಗೆದುಕೊಂಡರೆ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗ್ತಾರೆ…”

ಈ ವಿಚಾರ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗೋ ಮುನ್ನ ತಿಳಿಸಿ..!!!

 -ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್….

Posted in ಗುಸು..ಗುಸು.. | 1 ಟಿಪ್ಪಣಿ

ನಾನೇ ಆರತಿ!!-(ಭಾಗ-3)

ಭಾಗ-2 ರಿಂದ ಮುಂದುವರೆದಿದೆ….

ಭಾಗ-3:

………..ಅಷ್ಟು ಹೊತ್ತಿಗೆ ನಾನು ಆರತಿಯಾಗಿದ್ದೆ…ಅರ್ಥ ಆಗಲಿಲ್ವ…ನಾನು ಆರತಿಯವರ ತರಹನೇ ಮಿಮಿಕ್ರಿ ಮಾಡಲು ಆರಂಭಿಸಿದ್ದೆ…ಆ ಮಿಮಿಕ್ರಿಗೆ ಪ್ರೋತ್ಸಾಹಿಸಿದವರು ಬಿಂಬದ ಮಂದಿ…ಬಿಂಬಕ್ಕೆ ಬರುವ ಅತಿಥಿಗಳ ಮುಂದೆಯಲ್ಲ ನಾನು ಆರತಿ ತರ ಮಾಡಲು ಆರಂಬಿಸಿದೆ…ತಾತ(ಎ.ಎಸ್.ಮೂರ್ತಿ)ಅವರು ಮಿಮಿಕ್ರಿ ಮಾಡಲು ಕರದಾಗಲೆಲ್ಲ..ಖುಷಿಯಿಂದ ಹೋಗಿ ಮಾಡು ಬರುತಿದ್ದೆ..ನನ್ನ ಹೆಸರು ತಿಳಿಯದ ಕೆಲವರು ನನ್ನನ್ನು ‘ಆರತಿ’ಎಂದೆ ಕರಯಲು ಪ್ರಾರಂಭಿಸಿದರು…ಕೆಲವೊಮ್ಮೆ ಇದರಿಂದಾಗಿ ಮುಜುಗುರವೂ ಆಗುತಿತ್ತು…ಆ ವಿಷಯ ಬಿಡಿ..ನಂತರ ಆರತಿಯವರು ಪ್ರಕಾಶ್ ಸರ್ ಗೆ ಎಲ್ಲವನ್ನು ಹೇಳಿದರು…ಸರ್ ನನ್ನ ಕರೆದು ಒಂದು ವಾರದ ಕಾಲ ಒಂದು ಬೊಂಬೆಯಾಟದ ದೃಶ್ಯವನ್ನು ಹೇಳಿಕೊಟ್ಟರು..ಕಲಿತ ಮೇಲೆ ಒಂದು ದಿನ ಆರತಿಯವರು ಬಿಂಬಕ್ಕೆ ಬಂದು..ನಾನು readyಯಾಗಿದ್ದ ದೃಶ್ಯವನ್ನು ಮಾಡಲು ಹೇಳಿದರು…ಮಾಡಿದ ಮೇಲೆ ಒಂದು ಮುತ್ತು ಕೊಟ್ಟು ಹೋದರು…(ಎಷ್ಟೆ ಆಗಲಿ ಅಮೇರಿಕದವರು ತಾನೆ…)ನಂತರ shooting ಅಕ್ಕಯ್ಯಮ್ಮನ ಬೆಟ್ಟದಲ್ಲಿ ನಡೆಯಿತು…shootingಗೆ ನನ್ನ ಜೊತೆ ಅನ್ವಿತಾ,ರೋಹಿತ್,ಕಿರಣ್,ಬಿಂದು(ಈಗ ಅವಳು ನಮ್ಮೊಂದಿಗಿಲ್ಲ…) ಎಲ್ಲರೂ ಬಂದರು…shooting ಚೆನ್ನಾಗಿ ನಡೆಯಿತು…shooting spotಲ್ಲಿ ಬಹಳ ವಿನೋದ ನಡೆಯಿತು…ಸಂಜೆ ಮನೆಗೆ ಬಂದೆ…ಸ್ವಲ್ಪ ದಿನ ಆದ ಮೇಲೆ ಹೋಗಿ dubbing ಮಾಡಿಕೊಂಡು ಬಂದೆ…ನಂತರ ಒಂದು ದಿನ “ಮಿಠಾಯಿ ಮನೆ” pvr cinemas ನಲ್ಲಿ ತೆರೆಕಂಡಿತು..theater ಗೆ ಹೋಗಿ ಸಿನಿಮಾ ನೋಡಿದೆ…ಸಿನಿಮಾ ಆದ ಮೇಲೆ theaterನಲ್ಲಿ ಇದ್ದವರು ನನ್ನನ್ನು ನೋಡುತಿದ್ದನ್ನು ಕಂಡು..ಕೊಂಚ ನನಗೆ ಕೊಂಬು ಎದ್ದಿತು…ಆ ಕೊಂಬು ಯಾರೋ ಒಬ್ಬರು -“ಈ ಹುಡುಗ ನೋಡೆ…film ನಲ್ಲಿ ಒಂದ್ ಐದು ನಿಮಿಷ ಬಂದಿದ್ನಲ್ಲ…” ಎಂದ ಕೂಡಲೇ ಇಳಿದು ಹೋಯಿತು…

ಹೀಗೆ,ನನ್ನ ಜೀವನದಲ್ಲಿ “ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ…ರಂಗನಾಯಕಿ” ಹಾಗೆ ಸುಮ್ಮನೆ ಬಂದು ಹೋದರು….

 

……ಮುಗಿಯಿತು

ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್..

Posted in ಪಿಸು..ಪಿಸು | 1 ಟಿಪ್ಪಣಿ

ಆರತಿ ಫ್ರಂ ಜೆ.ಪಿ.ನಗರ!!-(ಭಾಗ-2)

ಭಾಗ-1 ರಿಂದ ಮುಂದುವರೆದಿದೆ…..

ಭಾಗ-2:

arathi-21

……………….2-ವಾರ ಆದಮೇಲೆ ಆರತಿ ಯವರ production manager ಒಂದು ಮಧ್ಯಾಹ್ನ ಫೋನ್ ಮಾಡಿದರು…ಅವಾಗ ನನಗೆ mid-term ಪರೀಕ್ಷೆ ನಡೆಯುತಿತ್ತು…ಸ್ಕೂಲ್ ಇಂದ ಬಂದ ಕೂಡಲೆ..ಅಮ್ಮ “ರೆಡಿ ಆಗೋ..ಆರತಿಯವರ ಮನೆಗೆ ಹೋಗ ಬೇಕು…screen test ಇದೆಯಂತೆ…3.30 ಗೆ ಬನ್ನಿ ಅಂತ ಹೇಳಿದ್ದಾರೆ…”ಎಂದರು…ನಾನು ಬೇಗ ತಿಂದು ರೆಡಿಯಾದೆ…ನನಗೆ ಒಳಒಳಗೆ ಭಯ..ನಾನು,ಅಕ್ಕ,ಅಮ್ಮ ಮನೆಯಿಂದ ಆಟೋ ಹಿಡಿದುಕೊಂಡು ಆರತಿಯವರ ಜೆ.ಪಿ.ನಗರದ “ಬೆಳ್ಳಿತೆರೆ”ಮನೆಗೆ ಹೊರಟೆವು…ಆಟೋದಲ್ಲಿ ಅಮ್ಮ ನನಗೆ ಟಿಪ್ಸ್ ಕೊಟ್ಟಿದ್ದು..ಕೊಟ್ಟಿದ್ದೆ…”ಡೈಲಾಗ್ ಜೋರಾಗಿ ಹೇಳು…ಹೆದರುಕೊ ಬೇಡ…ಜಾಸ್ತಿ ಮೇಕಪ್ ಮಾಡಬೇಡಿ ಅಂತ ಹೇಳು…ನಿನಗೆ ಅಲರ್ಗಿ ಆಗಿ ಸಿನ್ ಬರುತ್ತೆ…”ಹೀಗೆ ಅಮ್ಮ ನನ್ನ ಡೈರೆಕ್ಟ್ ಮಾಡಿದರು…ಬೆಳ್ಳಿತೆರೆ ಬಂತು…ಬಹಳ ದೊಡ್ದದಾದ ಮನೆ…ಎಷ್ಟೆ ಆಗಲಿ ರಂಗನಾಯಕಿಯ ಮನೆಯಲ್ಲವೆ..ದೊಡ್ಡದಾಗಿಯೇ ಇರಬೇಕು…ಅವರ ಮನೆಯ ಗೇಟ್ ತೆರೆದು ಒಳಗೆ ಹೋದೆವು…ಅಲ್ಲಿ ನನ್ನಂತೆಯೇ 5-6 ಮಕ್ಕಳು ಬಂದಿದ್ದರು…ಮನೆಯಲ್ಲಿ ಭಾರಿ ಲೈಟ್ ಗಳು,ರಿಫ್ಲೆಕ್ಟರ್ಗಳು..ಅದರ ಮೇಲೆ..ACTION…CUT…ಎಂದು ಆರತಿಯವರ ಅರಚಾಟ…ಮನೆಯ ತುಂಬಾ ಜನ…ಆರತಿಯವರ ನನ್ನನ್ನು ಕಂಡು “ಚೆನ್ನಾಗಿದ್ದಿಯಾ?…ಹೋಗಿ ಮೇಕಪ್ ಮಾಡಿಸಿಕೊಳ್ಳಪ್ಪ…ಸುರೇಶ್..ಈ ಹುಡುಗನಿಗೆ ಮೇಕಪ್ ಮಾಡ್ರಪ್ಪ…..”ಎಂದರು..ನಾನು ಹೋಗುವ ಅಷ್ಟರಲ್ಲಿ screen test ನಡೆಯಿತಿತ್ತು…ಮೇಕಪ್ ಆದಮೇಲೆ…ನನಗೆ ಡೈಲಾಗ್ ಕೊಟ್ರು…ಆ ಡೈಲಾಗ್ ಹೀಗಿತ್ತು”ಅಪ್ಪ…ಸ್ಕೂಲ್ ಅಲ್ಲಿ ಪಿಕ್-ನಿಕ್ ಗೆ ಹೋಗುತ್ತಿದ್ದಾರೆ…ನನ್ನ ಫ್ರೆಂಡ್ಸ್ ಎಲ್ಲಾ ಪಿಕ್-ನಿಕ್ ಗೆ ಹೋಗ್ತಾ ಇದ್ದಾರೆ..ನಾನು ಹೋಗ್ತೀನಿ…ದುಡ್ಡು ಕೊಡಪ್ಪ….”ಈ ಡೈಲಾಗನ್ನು ನಾನು ಹುರು ಹೋಡೆದು ಅವರಿಗೆ ನಾನು ರೆಡಿಯಂದೆ…ಅವರು ಒಂದು monitor ಮಾಡೋಣ ಎಂದರು…ನನಗೆ ಅರ್ಥ ಆಗಲ್ಲಿಲ್ಲ…ಆದರೂ ಸುಮ್ನೆ ‘ಸರಿ’ ಅಂದು ಹೋದೆ…ರೆಡಿ action ಎಂದರು…ನಾನು ಡೈಲಾಗ್ ಅನ್ನು ಮನೆ ಕಿತ್ತುಹೋಗುವ ಹಾಗೆ ಜೋರಾಗಿ ಮತ್ತು ಫಾಸ್ಟ ಆಗಿ ಹೇಳಿದೆ…ಇದನ್ನು ಕೇಳಿದ ಆರತಿಯವರು “cut it…ಎನ್ನಪ್ಪ…ನಿನ್ನ voice.u.u ಇಷ್ಟು ಜೋರು…slow ಆಗಿ soft ಆಗಿ ಹೇಳಬೇಕಪ್ಪ”ಎಂದರು..ನನಗೆ ನಾಟಕದಲ್ಲಿ ಅಭಿನಯಿಸಿದ ಅನುಭವವಿತ್ತು…ಅಲ್ಲಿ ಕಿರುಚಿ..ಕಿರುಚಿ…ಇಲ್ಲೂ ಕಿರುಚ ಬೇಕೆಂದುಕೊಂಡೆ….ಇನ್ನೊಂದು monitor ಮಾಡಿ..ಟೇಕ್ ತೆಗೆದು ಕೊಂಡರು…ಟೇಕ್ ಒ.ಕೆ ಯಾಯಿತು…ಆಮೇಲೆ..ಆರತಿಯವರು ಬಂದವರಿಗೆಲ್ಲಾ ಬಾದಾಮಿ ಹಾಲು ತರಿಸಿ ಕೊಟ್ಟರು…ನಂತರ “ಯಾರು select ಆಗಿದ್ದಾರೆಂದು ಫೋನ್ ಮಾಡಿ ತಿಳಿಸಿತ್ತೆವೆ ಎಂದರು….”ಆಮೇಲೆ ಖುಷಿಯಿಂದ ಹೊರಗಡೆ ಬಂದೆವು…ಅಲ್ಲೆ ಜೆ.ಪಿ.ನಗರದಲ್ಲಿ ಹತ್ತಿರವಿದ್ದ  ನಮ್ಮ ಕೋಮಲ ಆಂಟಿ(ನನ್ನ ಅಮ್ಮನ ಸಹೋದರಿ..ಅಂದರೆ ನನಗೆ ಚಿಕ್ಕಮ್ಮ) ಮನೆಗೆ ಹೋದೆವು…ಸ್ವಲ್ಪ ಹೊತ್ತು ಮಾತನಾಡಿ ಅಲ್ಲಿಂದ ನಮ್ಮ ಮನೆಗೆ ಹೊರಟೆವು…ಮನೆಯಲ್ಲಿ ಅಪ್ಪ-ಅಜ್ಜಿಯ ಮುಂದೆ ಮತ್ತೊಮ್ಮೆ performance ಆಯಿತು…

1-ವಾರ ಕಳಿದ ಮೇಲೆ ಆರತಿಯವರೆ ನಮ್ಮ ಮನೆಗೆ ಫೋನ್ ಮಾಡಿದರು…ನಮ್ಮ ಅಮ್ಮನ ಬಳಿ ಮಾತನಾಡಿದರು…”ಪುನೀತ್ ,screen ಮೇಲೆ ಬಹಳ ಪುಟ್ಟವನ ತರ ಕಾಣ್ತಾನೆ..ಅದಕ್ಕೆ ಅವನಿಗೋಸ್ಕರ ಒಂದು special role ಕೊಡುತ್ತಿದ್ದೇನೆ….film ಅಲ್ಲಿ ಒಂದು ಬೊಂಬೆಯಾಟದ ದೃಶ್ಯ ಬರುತ್ತೆ…ಅದರ ನಿರೂಪಕನ ಪಾತ್ರ ಪುನೀತ್ ಗೆ ಕೊಡುತ್ತಿದ್ದೇನೆ..ಬಿಂಬದ ಪ್ರಕಾಶ್ ಹತ್ತಿರ ಮಾತಾಡಿ ಒಂದು ಬೊಂಬೆಯಾಟಕ್ಕೆ ಅವನನ್ನು ರೆಡಿಮಾಡಲು ಹೇಳುತ್ತೇನೆ..ಬಾಯ್”ಎಂದರು…

ಅಷ್ಟು ಹೊತ್ತಿಗೆ ನಾನು ಆರತಿಯಾಗಿದ್ದೆ…ಅರ್ಥ ಆಗಲಿಲ್ವ….

…ಭಾಗ-3 ರಲ್ಲಿ ಮುಂದುವರೆಯುವುದು…..

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್..

Posted in ಪಿಸು..ಪಿಸು | 1 ಟಿಪ್ಪಣಿ

ಆರತಿ ಫ್ರಂ ಅಮೇರಿಕಾ!!-(ಭಾಗ-1)

ಭಾಗ-1:

picture13

“ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ…ರಂಗನಾಯಕಿ”

‘ರಂಗನಾಯಕಿ’ 20 ವರ್ಷ ಅಮೇರಿಕಾದಲ್ಲಿದ್ದು 2005 ರಲ್ಲಿ ಬೆಂಗಳೂರಿಗೆ ವಾಪಾಸ್ ಆದರು..ಆಗ ಅವರು ಮೊದಲು ಬಂದದ್ದು ಹನುಮಂತನಗರ ಬಿಂಬಕ್ಕೆ…ಆಗ ನಾನು ಬಿಂಬದ ವಿದ್ಯಾರ್ಥಿ ಆಗಿದ್ದೆ..ಅವರು ಬಿಂಬಕ್ಕೆ ಬಂದದ್ದು ೨ನೇ ತಿಂಗಳ ಮನರಂಜನಾ ಕಾರ್ಯಕ್ರಮಕ್ಕೆ…ಇನ್ನೊಂದು,ಅವರು ನಿರ್ದೇಶಿಸಲು ಹೊರಟ್ಟಿದ್ದ ಮಕ್ಕಳ ಚಿತ್ರ-‘ಮಿಠಾಯಿ ಮನೆ’ಕ್ಕೆ ಮಕ್ಕಳ ‘selection’.ಕಾರ್ಯಕ್ರಮಕ್ಕೂ ಮುನ್ನ ವನಮಾಲ ಆಂಟಿ(ಬಿಂಬದ ಸಂಚಾಲಕಿ) ನನ್ನ,ಅಕ್ಷರ,ದೀಕ್ಷ,ಭುವನಮಿತ್ರ ನ ಅರತಿಯವರ ಮುಂದೆ ಕರೆದುಕೊಂಡು ಹೋದರು…ಆರತಿಯೊಂದಿಗೆ ಅವರ ಮಗಳು ಯಶಸ್ವಿನಿ ಕೂಡ ಬಂದಿದ್ದರು..ಅವರದು english ಪ್ರೇಮ..ಆರತಿಯವರದ್ದು ಕಂglish ಪ್ರೇಮ…ಎಷ್ಟೆ ಆಗಲಿ 20 ವರ್ಷ ಅಮೇರಿಕಾದಲ್ಲಿ ಇದ್ರಲ್ಲ…ಕನ್ನಡ ಮರೆಯುವುದು ಸಹಜ..20 ವರ್ಷದಲ್ಲಿ ಅವರು englishiಗರ ಮನವ ಸೂರೆಗೊಂಡಿದ್ದರು…ಆ ವಿಷಯ ಬಿಡಿ…ಅರತಿಯವರು ನಮ್ಮನ್ನು ಕಂಡು ‘ಚೆನ್ನಾಗಿದ್ದಿರಾ ?..how r u ?’ಅಂತ ಕೇಳಿದ್ದೆ ತಡ..ನನ್ನ ಹಲ್ಲು ನನಗೆ ಗೊತ್ತಿಲ್ಲದೆ ಒಪನ್ ಆಯ್ತು…ಅವರನ್ನ ಟಿ.ವಿ.ಲಿ ಮಾತ್ರ ನೋಡಿದ್ದೆ…ಟಿ.ವಿ.ಯಲ್ಲಿ ಉದ್ದ ಜಡೆ ಇತ್ತಲ್ಲ…ಇಲ್ಲಿ ನೋಡಿದರೆ ಬಾಯ್ ಕಟ್…!!ಅವರು “ನೀವೆಲ್ಲಾ film ಅಲ್ಲಿ ಮಾಡ್ತೀರಾ..?..ನಿಮ್ಮ ಅಪ್ಪ-ಅಮ್ಮ ಒಪ್ಪುತ್ತಾರಾ?” ಅಂತ  ಕೇಳಿದರು…ಕೇಳಿದ್ದೆ ತಡ ನಾವೆಲ್ಲರೂ…”o.k.” ಎಂದೆವು…ಅವರು ಕಿಲ-ಕಿಲ ಅಂತ ನಕ್ಕೆರು…ಅವರು ತಂದಿದ್ದ ಒಂದು ಬುಕನ್ನು ನಮ್ಮ ಕೈಯಲ್ಲಿ(ಬಾಯಲ್ಲಿ!!) ಒದಲು ಹೇಳಿದರು..ನಾವೆಲ್ಲೆರು ಒದಿದೆವು…ಅವರು ಒ.ಕೆ ಎಂದು ಹೇಳಿ ನಮ್ಮನ್ನು ಹೊರಗಡೆ ಕಳುಹಿಸಿದರು…ನಂತರ ಕಾರ್ಯಕ್ರಮ ಪ್ರಾರಂಭವಾಯಿತು….ನನ್ನದೆ ಪ್ರಮುಖ ಪಾತ್ರ..(ಬೊಂಬೆಯಾಟದ ಪ್ರಮುಖ ಪ್ರಾತ್ರಕ್ಕೆ ನನ್ನ ಧ್ವನಿ)..ಅವರು ಬೊಂಬೆಯಾಟ ನೋಡುತ್ತಿದ್ದರೂ..ನಾನು ಅವರನ್ನೆ ನೋಡುತ್ತಿದ್ದೆ….ಒಂದು ಡೈಲಾಗ್ ಹೇಳೊದು..ಮತ್ತೆ ಅವರ ಕಡೆ ತಿರುಗಿ ಅವರ expression ಎನು? ಅಂತ ನೋಡುತ್ತಿದ್ದೆ..ಕಾರ್ಯಕ್ರಮ ಆಯ್ತು..ಅವರು ಮಾತಾಡಿದರು,ಹೊರಟರು….ಮನೆಗೆ ರಾತ್ರಿ ಬಂದ ಮೇಲೆ ಅಮ್ಮಂಗೆ ಈ ವಿಷಿಯ ಹೇಳ್ದೆ…ಅಮ್ಮಂಗೆ ಫುಲ್ ಖುಷಿ…ಒಡಿ ಹೊಗಿ ದೇವರ ಮನೆಯಲ್ಲಿ ದೀಪ ಹಚ್ಚಿದರು…(ಸಂಜೆ ದೀಪ ಹಚ್ಚೊದು ಮರೆತು ಹೋಗಿದ್ದರು…ಅದಕ್ಕೆ ಈಗ ಹಚ್ಚಿದರು)…ಒಂದು ವಾರ ಫುಲ್ ನನ್ನ ಕನಸು “lights,camera,action” ಅಂತ ಡಿಸೈನ್ ಡಿಸೈನ್ ಆಗಿತ್ತು…ಎನೋ ಹೀರೋನೇ ಆಗಿಬಿಟ್ಟೆ ಅನ್ನೋ ಹಾಗೆ ಆಡಿದೆ..

2-ವಾರ ಆದಮೇಲೆ ಆರತಿ ಯವರ production manager ಒಂದು ಮಧ್ಯಾಹ್ನ ಫೋನ್ ಮಾಡಿದರು…

 

….ಭಾಗ-2ರಲ್ಲಿ ಮುಂದುವರೆಯುವುದು…

-ನಿಮ್ಮ ‘ಹಾಗೆ ಸುಮ್ಮನೆ’ಪುನೀತ್..

Posted in ಪಿಸು..ಪಿಸು | ನಿಮ್ಮ ಟಿಪ್ಪಣಿ ಬರೆಯಿರಿ

ದಕ್ಷಿಣೆ ಕೊಟ್ಟರೆ ಮಾತ್ರ ಪ್ರಸಾದ…

bangalore-priests1

ಅದ್ ಯಾರೋ ದೊಡ್ದ ಮನುಷ್ಯರು “ದೇವರು ಕೊಟ್ಟರೂ,ಪೂಜಾರಿ ಕೊಡಲ್ಲ” ಅಂಥ ಹೇಳಿ ಹೋಗಿಬಿಟ್ಟರು…ಅದನ್ನು ನಿಜಮಾಡುವುದಕ್ಕಸ್ಕೋರ ನಮ್ಮ ಪೂಜಾರಿಗಳು ಹರಸಹಾಸ ಪಡುತ್ತಿದ್ದಾರೆ..ವರಕೊಡೋದಿರಲಿ,ಪ್ರಸಾದನೂ ನಿಟ್ಟಿಗೆ ಕೊಡಲ್ಲ…ದಕ್ಷಿಣೆ ಹಾಕಿದವರಿಗೆ ಮಾತ್ರ ಪ್ರಸಾದ..ಅದೂ ಆ ದಕ್ಷಿಣೆ 10ರೂ. ಆಗಿದ್ದರೆ ಚೂರು ಹೂವು ಮತ್ತು ಎರಡು ಬೆರೆಳಲ್ಲಿ ಹಿಡಿಯುವಷ್ಟು ಪ್ರಸಾದ..10ರೂ ಮೇಲಾದರೆ ಸರಿಯಾದ ಪ್ರಸಾದ…10ರೂ. ಕೆಳಗಿದ್ದರೆ ಪ್ರಸಾದವೂ ಇಲ್ಲ..ಹೂವಂಥೂ ಮೊದಲೇ ಇಲ್ಲ…ಯಾಕೀ ವ್ಯತ್ಯಾಸ…ಕೊಟ್ಟರೆ ಎಲ್ಲರಿಗೂ ಪ್ರಸಾದ ಕೊಡಲಿ..ಇಲ್ಲದಿದ್ದರೆ ಬೇಡ..ಒಬ್ಬರಿಗೊಂದು-ಇನ್ನೊಬ್ಬರಿಗೊಂದು ಮಾಡುವುದು ಬೇಡ..ಯಾರೂ ದೇವಸ್ಥಾನದ ಪ್ರಸಾದಕ್ಕೆ ಬರುವುದಿಲ್ಲ(ಬರುವ ಮಂದಿಯೂ ಇದ್ದಾರೆ..!!ಕ್ಷಮಿಸಿ!!)..ಬಂದವರಿಗೆ ಆ ದೇವರ ಮೇಲಿರುವ ಒಂದು ಹೂವು ಕೊಟ್ಟರೆ ಸಾಕು..ಇದು ಬೆಂಗಳೂರಲ್ಲಿ ಸರ್ವೇ ಸಮಾನ್ಯವಾಗಿ ನಡಿತಾ ಇದೆ..ಇಲ್ಲದಿದ್ದರೆ ಆ ಪುರೋಹಿತರ ಕತ್ತಲ್ಲಿ ಚಿನ್ನದ ಸರಗಳು ಹೇಗೆ ಬರುತ್ತೆ…ಪುರೋಹಿತರು “ಲಕ್-ಪತಿ”ಗಳಾಗಿ ಯಾವುದೇ “ರಿಯಲ್-ಎಸ್ಟೇಟ್ ಎಜೆಂಟ್” ಕಮ್ಮಿ ಇಲ್ಲದ ಹಾಗೆ ಕೈಗೆ ಬ್ರೆಸ್ ಲೆಟ್,ಕತ್ತಿಗೆ ಹಗ್ಗದ ತರಹದ 5-6 ಚಿನ್ನದ ಸರ,ಗೋಲ್ಡ್ ಸ್ಟ್ರಾಪ್ ವಾಚ್…ಇಷ್ಟೆಲ್ಲ ಸಾಲದು ಅಂತ ಪ್ರಸಾದ ಕೊಡೋಕೆ ಕೂತಿರುತ್ತಾರಲ್ಲ ಪೂಜಾರಿ-ಹೆಂಡ್ತಿ..ಅವರು ಸಾಕ್ಷಾತ್ ಲಕ್ಷ್ಮಿ ಆಗಿ ಬಿಟ್ಟಿರುತ್ತಾರೆ..ನಕ್ಕಿದರೆ ಮುತ್ತು ಉದಿರು ಹೋಗುತ್ತೆ ಎನೋ ಹಾಗೆ ದೆವ್ವ ಬಡಿದಿರುವವರ ತರಹ ಮುಖದ ಮೇಲೆ ಯಾವುದೇ ಭಾವವಿಲ್ಲದೆ ಕೂತು ಪ್ರಸಾದ ಕೊಡುತ್ತಾರೆ….ಇಂಥ ಹೈ-ಟೇಕ್ ಪುರೋಹಿತರಿಗೆ ಪಾಠ ಕಲಿಸಬೇಕು…ಪೂಜೆ ಮಾಡೋದನ್ನ business ಮಾಡಿಕೊಂಡಿದ್ದಾರೆ ಹಾಳಾದವರು..

ಈಗ ಆ ದೇವರು ಕೊಡುವುದಿರಲಿ,ಪೂಜಾರಿಯ ಕೊಡುವುದಿಲ್ಲ…

ಗಪ್-ಚಿಪ್…

 

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್

Posted in ಗುಸು..ಗುಸು.. | 4 ಟಿಪ್ಪಣಿಗಳು

ಬಬ್ಲಿ ನಾಯಕಿಯರು…

ಯಾಕಿಂಗ್ ಆಡ್ತಾರೋ..ಈ ನಾಯಕಿಯರು..

ಯಾಕಿಂಗ್ ಮಾಡ್ತಾರೋ..ಈ ನಾಯಕಿಯರು..

ಈ ಸಿನಿಮಾ ಮಂದಿ ಇದ್ದಾರೆ ನೋಡಿ..ಎನ್ನಿಲ್ಲ  ಅಂದ್ರೂ ,ಆಡದ್ ಮಾತ್ರ ರಾಜ್ರರ ಮಕ್ಕಳ ತರ..ಅದರಲ್ಲೂ ಈ ನಾಯಕಿಯರು ಇದ್ದಾರೆ ನೋಡಿ…ಒಂದು ಸಿನಿಮಾ ಮಾಡಿ ಬಿಟ್ಟರೆ ಅವರನ್ನ ಹಿಡಿಯಕ್ಕಾಗೋದಿಲ್ಲ…ಇನ್ನ ಆ ಸಿನಿಮಾ 4-5 ವಾರ ಒಡಿ ಬಿಟ್ಟರೆ(ಈಗ ಅದೇ ದೊಡ್ಡ ವಿಷಿಯ..ಅದೇ ಸೂಪರ್ ಹಿಟ್ ಸಿನಿಮಾ!!) ಅವರು ಲಗಾಮು ಇಲ್ಲದ ಕುದುರೆ ಆಗಿ ಬಿಡ್ತಾರೆ..ಕನ್ನಡ ಬಂದ್ರೂ englishಲ್ ಮಾತಾಡೋದು..ಇಂತವರನ್ನು ಕಂಡರೆ ನನಗೆ ಬಹಳ ಸಿಟ್ಟು ಬರುತ್ತದೆ…ನಿನ್ನೆ ಸಂಜೆ t.v ಹಚ್ಚಿದೆ…ಯಾವುದೋ ಸಿನಿ ಸುದ್ದಿಯ ಕಾರ್ಯಕ್ರಮ ಬರುತ್ತಿತ್ತು…ಅದನ್ನು ನೋಡಲು ಕೂತೆ…ಯಾವುದೋ ಸಿನಿಮಾ ನಟಿ(??-ಕನ್ನಡದವಳು) ಕನ್ನಡವೇ ಬರುವುದಿಲ್ಲವೇನೊ ಅನ್ನುವ ಹಾಗೆ ಬರೀ english ಅಲ್ಲೆ ಮಾತು…ಹುಡುಕಿದರೂ ಒಂದು ಕನ್ನಡ ಪದ ಸಿಗಲ್ಲಿಲ್ಲ..ಆದ್ರೆ ಇಂತವರ ಮಧ್ಯೆಯೂ ಕನ್ನಡದಲ್ಲಿ ಪೂಜಾ ಗಾಂಧಿಯಂತಹ ನಟಿಯರು ಇರುವುದು ಸಂತಸ ಪಡುವಂತಹ ವಿಚಾರ…ಬಂದ ಕೇವಲ 1 ವರ್ಷದಲ್ಲಿಯೇ ಕನ್ನಡವನ್ನು ಬಹಳ ಚೆನ್ನಾಗಿ ಕಲಿತು ಮಾತನಾಡುತ್ತಾರೆ..(ನಾನು ಇದನ್ನೂ t.v. ಯಲ್ಲಿ ‘ನೋಡಿದೆನಾ’..)ಮತ್ತೊಂದು,ನಮ್ಮ ನಟಿಯರ ಪ್ರಿಯವಾದ ಪದ ಅಂದ್ರೆ “ಬಬ್ಲಿ(bubbly)”..ಅವರ interview ಬಬ್ಲಿ ಅನ್ನೋ ಪದ ಇಲ್ಲದೆ ಮುಗಿಯುದಿಲ್ಲ…ಚಿತ್ರದಲ್ಲಿ ಯಾವುದೋ ಅಡ್ಕಾಸಿ ಪಾತ್ರ ಮಾಡಿದ್ದರೂ,ಹೇಳೋದು ಮಾತ್ರ “ಬಬ್ಲಿ”..ಒಮ್ಮೆ ನೀವು ನಿಮ್ಮ ಪಾತ್ರದ ಬಗ್ಗೆ ಹೇಳಿ ಅಂತ ಕೇಳಿ…ಅವರಿಗೆ ಸ್ವರ್ಗವೇ ಸಿಕ್ಕಿದ ಹಾಗೆ ಆಗುತ್ತದೆ…”ನಾನು ನಿಮ್ಮ _______,My role is very bubbly..bubbly…naugthy role ನಂದು..film is very good..Audience will like it..”ಇದರಲ್ಲಿ ನಾನು,ನಂದು ಅನ್ನುವ ಪದ ಬಿಟ್ಟರೆ ಮತ್ತಾವುದು ಕನ್ನಡ ಪದಗಳಿಲ್ಲ…ಕನ್ನಡ ಮಾತಾಡಿದರೆ ಬಾಯ್ ನೋವು ಬರುತ್ತಾ???ಕನ್ನಡದ ನಾಡು ಬೇಕು,ಕನ್ನಡದ ನೀರು ಬೇಕು,ಅವರ Poster ಅಂಟಿಸಲು ಕನ್ನಡದ ಗೋಡೆ ಬೇಕು,ಅವರ ಸಿನಿಮಾ ನೋಡಲು ಕನ್ನಡದ ಮಂದಿ ಬೇಕು,ಬೀದಿಯಲ್ಲಿ ಸಿಕ್ಕಾಗ ಒಡಿ ಬಂದು autograph  ಕೇಳಕ್ಕೆ ಕನ್ನಡದವರು ಬೇಕು..,ಆದ್ರೆ ಮಾತಾಡಕ್ಕೆ ಮಾತ್ರ ಕನ್ನಡ ಬೇಡ..ಎಂಥಾ ನ್ಯಾಯ ಸ್ವಾಮಿ…ಯಾವುದಾದರೂ Reality showಗಳಿಗೆ guestಆಗಿ ಕರೆದು ಹಾಡಿ ಅಂದ್ರೆ..”Please…my Voice is not good(ನಿಜವಾಗಿಯೂ ಚೆನ್ನಾಗಿರಲ್ಲ…)..(ಫೋರ್ಸ್ ಮಾಡಿದ ಮೇಲೆ)..ok..i’ll sing a hindi song…’___________’ (ಕೆಟ್ಟದಾಗಿ ಹಾಡಿ ಮುಗಿಸುವರು)”..ಈ ಪಾಟಿ Scope ಹೋಡಿತಾರಲ್ಲ..ಇದ್ಯಾಕೆ ಅಂತ ಗೊತ್ತ..ಯಾರದ್ರೂ ಬೇರೆ ಭಾಷೆಯವರು ಕರಿತಾರೆನೋ ಅಂತ…ಇಷ್ಟೊಂದು gimmikಗಳನ್ನ ಮಾಡಿ ಪಾತ್ರ ಗಿಟ್ಟಿಸಿ ಕೊಳ್ಳಬೇಕಾ??ಇದೆಲ್ಲ ಬಿಡಿ…ಒಂದು ಸಿನಿಮಾ ಮಾಡಿ ಬಿಟ್ಟರೆ,ಅದು ಯಾವುದಾದರೂ ದೊಡ್ಡ ನಟನ ಜೊತೆ,ಕೇಳಲೇ ಬೇಡಿ..ಪ್ರತಿ ಹಬ್ಬಕ್ಕೂ ಅವರ ದೊಂದು Show..ಅದರಲ್ಲಿ ಅವರು..ಕಣ್ಣಿಗೆ goggles ಹಾಕಿಕೊಂಡು..ಮೈ ಮೇಲೆ ದೆವ್ವ ಬಂದಿರುವ ಹಾಗೆ,ಕೂದಲ್ಲನ್ನು ಕಟ್ಟಿಕೊಳ್ಳದೇ..ಪ್ಯಾಂಟು,ಶರ್ಟ್ ಹಾಕಿಕೊಂಡು..ಯಾವುದಾದರೂ 5* hotel ಗಳಿಗೆ ಹೋಗಿ ಕಂಠ ಪೂರ್ತಿ ತಿಂದು,ತೇಗಿ..yummy ಎಂದು ಹೇಳಿ ಹೊರಡುತ್ತಾರೆ…

ಇವೆರೆಲ್ಲರೂ ನಮ್ಮ ಪ್ರೀತಿಯ ಬಬ್ಲಿ ನಾಯಕಿಯರು…

ಇಂತಹ ಆಂಗ್ಲ ಮೋಹದವರನ್ನು ಎನು ಮಾಡಬೇಕು??

ಬಬ್ಲಿ ಹುಡ್ಗಿರಂದ್ರೆ Danger ಅಪ್ಪೊ..

ಹುಷಾರಾಗಿರಪ್ಪೊ…

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್..

Posted in ಗುಸು..ಗುಸು.. | 3 ಟಿಪ್ಪಣಿಗಳು

ಕಣ್ಣೆದುರಲ್ಲೆ ಕಂಡ ಮೊದಲ ಸಾವು..

preethiya-thatha1ಅಂದು 15 ಜನವರಿ 2004,ಸಂಕ್ರಾಂತಿ ಹಬ್ಬ.ಮನೆಯಲ್ಲೆಲ್ಲ ಹಬ್ಬದ ವಾತಾವರಣ.ಅಮ್ಮ,ಅಜ್ಜಿ,ತಾತ,ಮತ್ತೆ ನಾನು ಎಲ್ಲರು ಬೆಳ್ಳಿಗೆ ಬೇಗ ಎದ್ದಿದ್ದೆವು.ಅಪ್ಪ ಮತ್ತು ಅಕ್ಕ ಮಾತ್ರ ಇನ್ನೂ ಮಲಗಿದ್ದರು.ಅಮ್ಮ ನನಗೆ ಕಾಫಿ ಕೊಟ್ಟರು.ತಾತ ಸ್ನಾನಕ್ ಹೋಗಿದ್ದರು.ಅಜ್ಜಿನೂ ನನ್ ಜೊತೆ ಕಾಫಿ ಕುಡಿದರು.ತಾತ ಸ್ನಾನ ಮುಗಿಸಿ ಮಡಿಬಟ್ಟೆಯನ್ನು ಸುತ್ತುಕೊಂಡು ಹೊರಬಂದರು.ಅವರಿಗೂ ಒಂದು ಲೋಟ ಕಾಫಿ ಸಿಕ್ಕಿತು.ನಮ್ಮ ಹಿಂದಿನ ಬೀದಿಯಲ್ಲಿರುವ ಲಕ್ಷಮ್ಮನವರು ಅದೇ ಸಮಯಕ್ಕೆ ನಮ್ಮ ಮನೆಗೆ ಬಂದರು.ಅಮ್ಮ ಅವರಿಗೂ ಕಾಫಿ ಕೊಟ್ಟರು.ಮನೆಯಲ್ಲಿ,ಹಬ್ಬದ ದಿನವೂ ಸೊಸೆ ಬೇಗ ಎದ್ದಿಲ್ಲವೆಂದೂ, ಹಾಲು ತೆಗೆದುಕೊಂಡು ಹೋಗಿ ಕಾಫಿಮಾಡಿ ಎಬ್ಬಿಸಬೇಕಮ್ಮ ಎಂದು ಲಕ್ಷ್ಮಮ್ಮ ನಮ್ಮ ಅಜ್ಜಿಯ ಬಳಿ ಹೇಳಿದರು. .ಆಗ ಅಜ್ಜಿ ಅಮ್ಮನ ಕಡೆ ನೋಡಿ “ನನ್ನ ಸೊಸೆಯೆ ವಾಸಿ”ಎಂದು ಅಂದುಕೊಂಡರು.ನಂತರ ಲಕ್ಷ್ಮಮ್ಮನವರು ಹೊರಟುಹೋದರು.ನಂತರ ಒಬ್ಬೊರಾಗಿ ಅಕ್ಕ,ಅಪ್ಪ ಎದ್ದರು.ಆಮೇಲೆ ಕಿತ್ತಾಟ…ಆ ಕಿತ್ತಾಟ ಯಾವುದಕ್ಕಾಗಿ ಎಂದು ಮನೆಯಲ್ಲಿ ಒಂದೆ ಬಾತ್-ರೂಮ್ ಇರುವವರಿಗೆಲ್ಲಾ ತಿಳಿದಿರುತ್ತೆ….

ಅಂದು ಹಬ್ಬ ನೋಡಿ…ಟೀವಿಯಲ್ಲಿ ಹರಟೆ ಕಾರ್ಯಕ್ರಮ,ಸುದಾ ಬರಗೂರು,ಪ್ರಾಣೇಶ್,ಕೃಷ್ಣೇಗೌಡರ ಮಾತನಾಡುವುದನ್ನು ಕೇಳಿಸಿಕೊಳ್ಳುವುದಕ್ಕೆ ಅದೆಷ್ಟೋ ಮಂದಿ ಕಾದಿರುತ್ತಾರೆ..ಆ ಅದೆಷ್ಟೋ ಮಂದಿಯಲ್ಲಿ ನಮ್ಮ ಮನೆಯವರು ಕೂಡ ಒಬ್ಬರು.. “ಬೇಗ-ಬೇಗ ಸ್ನಾನ ಮಾಡಿಬಿಡಿ…ಹರಟೆ ಶುರುವಾಗುತ್ತೆ..”ಎಂದು ಅಜ್ಜಿ ಹೇಳಿದರು..ತಾತ ಪೂಜೆ ಮಾಡಲು ಸಿದ್ದರಾಗುತ್ತಿದ್ದರು..ಆಗ ಅಮ್ಮ ಇನ್ನೊಂದ್ ರೌಂಡ್ ಕಾಫಿ ಕೊಟ್ಟರು..ಎಲ್ಲರೂ ಕುಡಿದೆವು..ಕಾಫಿ ಕುಡಿದ ಮೇಲೆ ಅಪ್ಪ ಪೇಪರ್ ಒದಲು ಹೋದರು..ಅಮ್ಮ ಹಬ್ಬದಡಿಗೆ ಮಾಡುತ್ತಿದ್ದರು..ತಾತ ತಕ್ಷಣ ಕುರ್ಚಿ ಮೇಲೆ ಕುಸಿದು ಬಿಟ್ಟರು.ಕುಸಿದ ತಾತ ಮೇಲೆ ನೋಡಿಕೊಂಡು ಎಂಜಲನ್ನು ಹೊರಹಾಕಲು ಪ್ರಾರಂಭಿಸಿದರು.ಇದನ್ನು ನೋಡಿದ ನಮ್ಮಮ್ಮ ಒಡಿ ಬಂದು ಅವರ ತಲೆಯ ಮೇಲೆ ನೀರನ್ನು ತಟ್ಟಿದರು..ತಾತ ಸ್ವಲ್ಪ ಸುದಾರಿಸಿ ಕೊಂಡರು..ಈ ರೀತಿ ಹಿಂದೆಯೂ,ಅದೆಷ್ಟೊ ಬಾರಿ ಆಗಿದೆ..ಅದೇ ರೀತಿ ಎಂದುಕೊಂಡು,ಅಮ್ಮ-ಅಪ್ಪ-ಅಜ್ಜಿ ಸುಮ್ಮನಾದರು…ಅವತ್ತು ಎಲ್ಲರಿಗೂ “ಹರಟೆ”ದೆ ಚಿಂತೆ..ಅದೇ ತಾತನಿಗೆ ಯಮರಾಜ ಕೊಟ್ಟ ಮೊದಲ ಕರೆಯೋಲೆ ಅನಿಸುತ್ತೆ.”ಬೇಗ ಸಿದ್ದನಾಗು..ಎಂದು ಆ ಯಮರಾಜ ಬಂದು ನಮ್ಮ ತಾತನ ಕಿವಿಯಲ್ಲಿ ಹೇಳಿದರು ಎನಿಸುತ್ತೆ..ನಂತರ ನಾನೂ-ಅಕ್ಕ , ಮನೆ ಮುಂದೆ ಆಡಲು ಪ್ರಾರಂಬಿಸಿದೆವು..ನಮ್ಮ ಆಟಕ್ಕೆ ಪಕ್ಕದ ಮನೆಯ ಹುಡುಗರು ಬಂದು ಸೇರಿಕೊಂಡರು..ನಾವೆಲ್ಲರೂ ಸೇರಿ ಡಂಶರಟ್ಸ್ ಆಡಿದೆವು…ಆಗ ಅಮ್ಮ ಇನ್ನೊಂದು ರೌಂಡ್ ಕಾಫಿಗೆ ಕರೆದರು..ನಾನು ಒಳಗೆ ಹೋದಾಗ ತಾತ ಆಗತಾನೆ ಪೂಜೆ ಮುಗಿಸಿ,ಕಾಫಿ-ಬಿಸ್ಕತ್ ತಿನ್ನುತ್ತಿದ್ದರು.ನನಗೆ “ಬಿಸ್ಕತ್ ತೆಗೆದು ಕೊಳ್ಳಪ್ಪ..” ಎಂದು ಹೇಳಿದರು..ಅದೇ ಅವರ ಕಡೆಯ ಮಾತು..ಈ ಮಾತಾದ ಮೇಲೆ ಅವರು ಇನ್ಯಾವತ್ತು ಮಾತಡಲಿಲ್ಲ…ಹೌದು,ಬಿಸ್ಕತ್ ತೆಗೆದುಕೊಂಡು ಮತ್ತೆ ಆಡಲು ನಾನು ಹೋದೆ..ನಾನು ಹೋದ ೧೫ ನಿಮಿಷಗಳಲ್ಲೆ,ಅಪ್ಪ ಗಾಬರಿಯಿಂದ ಒಡಿಹೊರ ಬಂದರು…ಎನು ಎಂದು ಕೇಳುವಷ್ಟರಲ್ಲೆ..ಅಪ್ಪ ಒಡಿ ಹೋಗಿ ಪಕ್ಕದ ಮನೆ ಡಾಕ್ಟರ್ ಆಂಟಿಯನ್ನು ಕರೆತಂದರು…ನಾನು ಸ್ನೇಹಿತರಿಗೆ “ಟಾಟಾ” ಹೇಳಿ ಒಳಗೆ ಒಡಿ ಬಂದೆ..ಅಲ್ಲಿ ನನಗೆ ಕಂಡದ್ದು ಸಾವು-ಬದುಕಿನ ನಡುವೆ ನರಳುತ್ತಿದ್ದ ತಾತ..ಜೋರಾಗಿ ಉಸಿರಾಡುತ್ತಿದ್ದರು..ಅವರ ಉಸಿರಿನ ರಬಸಕ್ಕೆ ನಾನು ಹೆದರಿದೆ..ಡಾಕ್ಟರ್ ಆಂಟಿ ಬಂದು ಒಂದು injection ಕೊಟ್ಟರು..ಕೊಟ್ಟ ಮೇಲೆ ತಾತ ಉಸಿರಾಟದ ರಬಸ ಕಮ್ಮಿಯಾಯಿತು…ಅಜ್ಜಿ ನನ್ನನ್ನು ಹಿಡಿದು ಅಳಲು ಪ್ರಾರಂಭಿಸಿದರು.ನನಗೆ ಮಾತೆ ಹೊರಳಲೆ ಇಲ್ಲ..ತಕ್ಷಣ ambulance ಬಂತು,ತಾತನ್ನು Stretch ಗೆ ಹಾಕಿಕೊಂಡರು..ತಾತ ಮತ್ತೆ ಜೋರಾಗಿ ಉಸಿರಾಡಲು ಪ್ರಾರಂಭಿಸಿದರು..ಮನೆಯ ಬಾಗಿಲಿನಿಂದ ಹೊರಗೆ ತೆಗೆದ ಮೇಲಂತೂ ಆ ಉಸಿರು ಹಿಡಿತ ತಪ್ಪಿತು..ನಮ್ಮ site ನ ಮದ್ಯೆ ಬಂದ ಕೂಡಲೆ ತಾತ ಒಂದು ಜೋರಾದ ಉಸಿರನ್ನು ಹೊರಹಾಕಿದರು..ಅದೇ ಅವರ ಕಡೆ ಉಸಿರು..ಇದನ್ನು ಕಂಡವ ನಾನೊಬ್ಬನೇ…ambulance ಒಳಗೆ ಹಾಕಿಕೊಂಡು ಹೋದರು..ಅಮ್ಮ-ನಾನು ಮನೆಯಲ್ಲೆ ಉಳಿದು ಕೊಂಡೆವು..ತಾತ ಸತ್ತ ವಿಚಾರವನ್ನ ಅಮ್ಮನಿಗೆ ಹೇಳಲು ನನಗೆ ಭಯ..ಆಕೆ ಎನಾದರೂ ನನ್ನ ಬೈದು ಬಿಟ್ಟರೆ ಎನ್ನುವ ಆತಂಕ..ambulance ಹೋದ ೨೦ನಿಮಿಷಕ್ಕೆ ಅಪ್ಪ ಕರೆ ಮಾಡಿದರು..ಆ ಕರೆಯನ್ನು ತೆಗೆದುಕೊಳ್ಳುವುದಕ್ಕೆ ನನಗೆ ಭಯ,ಅಮ್ಮನೇ ಬಂದು ತೆಗೆದು ಕೊಂಡರು..ಅಮ್ಮ ಜೋರಾಗಿ ಅಳಲು ಪ್ರಾರಂಭಿಸಿದರು..ಆಕೆ ವಿಚಾರ ಹೇಳುವ ಮುನ್ನವೇ ನಾನು ಜೋರಾಗಿ ಅಳಲು ಪ್ರಾರಂಭಿಸಿದೆ…ನನ್ನ ನೋಡಿದ ಅಕ್ಕ ಕೂಡ ಆಳಲು ಪ್ರಾರಂಭಿಸಿದರು…ತಾತನ ದೇಹ ಮನೆಗೆ ಬಂತು..ಆ ದೇಹವನ್ನು ನೋಡಿದ ಕೂಡಲೇ ನನ್ನ ಕಣ್ಣೀರು ಕಟ್ಟೆ ಹೊಡಿದು ಹೊರಬಂತು….     

ಅದೇ…ತಾತನಿಗೆ ಕಡೆಯ ದಿನ……..

ಈಗ ತಾತ ಕೇವಲ ಗೊಡೆಯ ಮೇಲಿರುವ ಒಂದು ನಿರ್ಜೀವ ಫೋಟೋ…

ಆ ಫೋಟೋಗೆ ಹೂವಿಡುವುದು ಮಾತ್ರ ನಮ್ಮ  ಕೆಲಸ..

ಸಂಕ್ರಾಂತಿ ಹಬ್ಬದ ದಿನ ಸಾವನ್ನು ಪಡೆದ ಆ ಜೀವವೇ ಪುಣ್ಯ.. ಆ ಭೀಷ್ಮನ ಸಾವು…

ಇದು ನನ್ನ ಜೀವನದಲ್ಲಿ “ಕಣ್ಣೆದುರಲ್ಲೆ ಕಂಡ ಮೊದಲ ಸಾವು”…

ಈಗ ತಾತ ಸ್ವರ್ಗದಲ್ಲಿ ಹಾಯಾಗಿದ್ದಾರೆ ಎಂದು ನಂಬುವ…

ನಿಮ್ಮ ‘ಹಾಗೆ ಸುಮ್ಮನೆ’ಪುನೀತ್.

Posted in ಪಿಸು..ಪಿಸು | 7 ಟಿಪ್ಪಣಿಗಳು