ಭಾಗ-1 ರಿಂದ ಮುಂದುವರೆದಿದೆ…..
ಭಾಗ-2:

……………….2-ವಾರ ಆದಮೇಲೆ ಆರತಿ ಯವರ production manager ಒಂದು ಮಧ್ಯಾಹ್ನ ಫೋನ್ ಮಾಡಿದರು…ಅವಾಗ ನನಗೆ mid-term ಪರೀಕ್ಷೆ ನಡೆಯುತಿತ್ತು…ಸ್ಕೂಲ್ ಇಂದ ಬಂದ ಕೂಡಲೆ..ಅಮ್ಮ “ರೆಡಿ ಆಗೋ..ಆರತಿಯವರ ಮನೆಗೆ ಹೋಗ ಬೇಕು…screen test ಇದೆಯಂತೆ…3.30 ಗೆ ಬನ್ನಿ ಅಂತ ಹೇಳಿದ್ದಾರೆ…”ಎಂದರು…ನಾನು ಬೇಗ ತಿಂದು ರೆಡಿಯಾದೆ…ನನಗೆ ಒಳಒಳಗೆ ಭಯ..ನಾನು,ಅಕ್ಕ,ಅಮ್ಮ ಮನೆಯಿಂದ ಆಟೋ ಹಿಡಿದುಕೊಂಡು ಆರತಿಯವರ ಜೆ.ಪಿ.ನಗರದ “ಬೆಳ್ಳಿತೆರೆ”ಮನೆಗೆ ಹೊರಟೆವು…ಆಟೋದಲ್ಲಿ ಅಮ್ಮ ನನಗೆ ಟಿಪ್ಸ್ ಕೊಟ್ಟಿದ್ದು..ಕೊಟ್ಟಿದ್ದೆ…”ಡೈಲಾಗ್ ಜೋರಾಗಿ ಹೇಳು…ಹೆದರುಕೊ ಬೇಡ…ಜಾಸ್ತಿ ಮೇಕಪ್ ಮಾಡಬೇಡಿ ಅಂತ ಹೇಳು…ನಿನಗೆ ಅಲರ್ಗಿ ಆಗಿ ಸಿನ್ ಬರುತ್ತೆ…”ಹೀಗೆ ಅಮ್ಮ ನನ್ನ ಡೈರೆಕ್ಟ್ ಮಾಡಿದರು…ಬೆಳ್ಳಿತೆರೆ ಬಂತು…ಬಹಳ ದೊಡ್ದದಾದ ಮನೆ…ಎಷ್ಟೆ ಆಗಲಿ ರಂಗನಾಯಕಿಯ ಮನೆಯಲ್ಲವೆ..ದೊಡ್ಡದಾಗಿಯೇ ಇರಬೇಕು…ಅವರ ಮನೆಯ ಗೇಟ್ ತೆರೆದು ಒಳಗೆ ಹೋದೆವು…ಅಲ್ಲಿ ನನ್ನಂತೆಯೇ 5-6 ಮಕ್ಕಳು ಬಂದಿದ್ದರು…ಮನೆಯಲ್ಲಿ ಭಾರಿ ಲೈಟ್ ಗಳು,ರಿಫ್ಲೆಕ್ಟರ್ಗಳು..ಅದರ ಮೇಲೆ..ACTION…CUT…ಎಂದು ಆರತಿಯವರ ಅರಚಾಟ…ಮನೆಯ ತುಂಬಾ ಜನ…ಆರತಿಯವರ ನನ್ನನ್ನು ಕಂಡು “ಚೆನ್ನಾಗಿದ್ದಿಯಾ?…ಹೋಗಿ ಮೇಕಪ್ ಮಾಡಿಸಿಕೊಳ್ಳಪ್ಪ…ಸುರೇಶ್..ಈ ಹುಡುಗನಿಗೆ ಮೇಕಪ್ ಮಾಡ್ರಪ್ಪ…..”ಎಂದರು..ನಾನು ಹೋಗುವ ಅಷ್ಟರಲ್ಲಿ screen test ನಡೆಯಿತಿತ್ತು…ಮೇಕಪ್ ಆದಮೇಲೆ…ನನಗೆ ಡೈಲಾಗ್ ಕೊಟ್ರು…ಆ ಡೈಲಾಗ್ ಹೀಗಿತ್ತು”ಅಪ್ಪ…ಸ್ಕೂಲ್ ಅಲ್ಲಿ ಪಿಕ್-ನಿಕ್ ಗೆ ಹೋಗುತ್ತಿದ್ದಾರೆ…ನನ್ನ ಫ್ರೆಂಡ್ಸ್ ಎಲ್ಲಾ ಪಿಕ್-ನಿಕ್ ಗೆ ಹೋಗ್ತಾ ಇದ್ದಾರೆ..ನಾನು ಹೋಗ್ತೀನಿ…ದುಡ್ಡು ಕೊಡಪ್ಪ….”ಈ ಡೈಲಾಗನ್ನು ನಾನು ಹುರು ಹೋಡೆದು ಅವರಿಗೆ ನಾನು ರೆಡಿಯಂದೆ…ಅವರು ಒಂದು monitor ಮಾಡೋಣ ಎಂದರು…ನನಗೆ ಅರ್ಥ ಆಗಲ್ಲಿಲ್ಲ…ಆದರೂ ಸುಮ್ನೆ ‘ಸರಿ’ ಅಂದು ಹೋದೆ…ರೆಡಿ action ಎಂದರು…ನಾನು ಡೈಲಾಗ್ ಅನ್ನು ಮನೆ ಕಿತ್ತುಹೋಗುವ ಹಾಗೆ ಜೋರಾಗಿ ಮತ್ತು ಫಾಸ್ಟ ಆಗಿ ಹೇಳಿದೆ…ಇದನ್ನು ಕೇಳಿದ ಆರತಿಯವರು “cut it…ಎನ್ನಪ್ಪ…ನಿನ್ನ voice.u.u ಇಷ್ಟು ಜೋರು…slow ಆಗಿ soft ಆಗಿ ಹೇಳಬೇಕಪ್ಪ”ಎಂದರು..ನನಗೆ ನಾಟಕದಲ್ಲಿ ಅಭಿನಯಿಸಿದ ಅನುಭವವಿತ್ತು…ಅಲ್ಲಿ ಕಿರುಚಿ..ಕಿರುಚಿ…ಇಲ್ಲೂ ಕಿರುಚ ಬೇಕೆಂದುಕೊಂಡೆ….ಇನ್ನೊಂದು monitor ಮಾಡಿ..ಟೇಕ್ ತೆಗೆದು ಕೊಂಡರು…ಟೇಕ್ ಒ.ಕೆ ಯಾಯಿತು…ಆಮೇಲೆ..ಆರತಿಯವರು ಬಂದವರಿಗೆಲ್ಲಾ ಬಾದಾಮಿ ಹಾಲು ತರಿಸಿ ಕೊಟ್ಟರು…ನಂತರ “ಯಾರು select ಆಗಿದ್ದಾರೆಂದು ಫೋನ್ ಮಾಡಿ ತಿಳಿಸಿತ್ತೆವೆ ಎಂದರು….”ಆಮೇಲೆ ಖುಷಿಯಿಂದ ಹೊರಗಡೆ ಬಂದೆವು…ಅಲ್ಲೆ ಜೆ.ಪಿ.ನಗರದಲ್ಲಿ ಹತ್ತಿರವಿದ್ದ ನಮ್ಮ ಕೋಮಲ ಆಂಟಿ(ನನ್ನ ಅಮ್ಮನ ಸಹೋದರಿ..ಅಂದರೆ ನನಗೆ ಚಿಕ್ಕಮ್ಮ) ಮನೆಗೆ ಹೋದೆವು…ಸ್ವಲ್ಪ ಹೊತ್ತು ಮಾತನಾಡಿ ಅಲ್ಲಿಂದ ನಮ್ಮ ಮನೆಗೆ ಹೊರಟೆವು…ಮನೆಯಲ್ಲಿ ಅಪ್ಪ-ಅಜ್ಜಿಯ ಮುಂದೆ ಮತ್ತೊಮ್ಮೆ performance ಆಯಿತು…
1-ವಾರ ಕಳಿದ ಮೇಲೆ ಆರತಿಯವರೆ ನಮ್ಮ ಮನೆಗೆ ಫೋನ್ ಮಾಡಿದರು…ನಮ್ಮ ಅಮ್ಮನ ಬಳಿ ಮಾತನಾಡಿದರು…”ಪುನೀತ್ ,screen ಮೇಲೆ ಬಹಳ ಪುಟ್ಟವನ ತರ ಕಾಣ್ತಾನೆ..ಅದಕ್ಕೆ ಅವನಿಗೋಸ್ಕರ ಒಂದು special role ಕೊಡುತ್ತಿದ್ದೇನೆ….film ಅಲ್ಲಿ ಒಂದು ಬೊಂಬೆಯಾಟದ ದೃಶ್ಯ ಬರುತ್ತೆ…ಅದರ ನಿರೂಪಕನ ಪಾತ್ರ ಪುನೀತ್ ಗೆ ಕೊಡುತ್ತಿದ್ದೇನೆ..ಬಿಂಬದ ಪ್ರಕಾಶ್ ಹತ್ತಿರ ಮಾತಾಡಿ ಒಂದು ಬೊಂಬೆಯಾಟಕ್ಕೆ ಅವನನ್ನು ರೆಡಿಮಾಡಲು ಹೇಳುತ್ತೇನೆ..ಬಾಯ್”ಎಂದರು…
ಅಷ್ಟು ಹೊತ್ತಿಗೆ ನಾನು ಆರತಿಯಾಗಿದ್ದೆ…ಅರ್ಥ ಆಗಲಿಲ್ವ….
…ಭಾಗ-3 ರಲ್ಲಿ ಮುಂದುವರೆಯುವುದು…..
-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್..